ಬಟ್ಟೆ ಕೈ ಚೀಲ

ಬಟ್ಟೆ ಕೈ ಚೀಲ

bag
 80
5
(1)

ಬೆಂಗಳೂರಿನ ಕೆ. ಆರ್.ರಸ್ತೆಯಲ್ಲಿ ಇರುವ ಕಲಾಕೃಷಿ ಎಂಬ ವಿಶೇಷ ಮಕ್ಕಳ ವೃತ್ತಿ ತರಬೇತಿ ಕೇಂದ್ರದ ಉತ್ಪನ್ನ. ಈ ಸಂಸ್ಥೆಯಲ್ಲಿ 18ವರ್ಷ ಮೇಲ್ಪಟ್ಟ ಮಕ್ಕಳಿಗೆ, ಬಟ್ಟೆಯ ಕಾಲೊರೆಸು ಮಾಡಲು, ಕ್ಯಾಂಡಲ್ ಮಾಡಲು, ಕೈ ಚೀಲದ ಮೇಲೆ ಪೈಂಟಿಂಗ್ ಮಾಡಲು, ಹೀಗೆ ಅನೇಕ ರೀತಿಯ ತರಬೇತಿಯನ್ನು ನೀಡಲಾಗುತ್ತಿದೆ. ಸ್ವತಃ ಈ ಸಂಸ್ಥೆಯನ್ನು ಪೋಷಕರೇ ನಡೆಸುತ್ತಿದ್ದಾರೆ. ಇಂತಹ ಮಕ್ಕಳನ್ನು ಸಮಾಜ ಬರಿ ಕರುಣೆಯಿಂದ ನೋಡಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸದೆ, ಅವರು ತಯಾರಿಸಿದ ವಸ್ತುಗಳನ್ನು ಖರೀದಿಸಿ, ಅವರನ್ನು ಉತ್ತೇಜಿಸಬೇಕು. ಈ ವಿಶೇಷ ಮಕ್ಕಳ ತಾಯಂದಿರು ಸಹ ಬೇರೆ ರೀತಿಯ ಕೈ ಚೀಲಗಳನ್ನು ಹೋಲಿಯುತ್ತಿದ್ದಾರೆ. ಅದನ್ನು ಸಹ ನಾವು ಮಾರಾಟ ಮಾಡುತ್ತೇವೆ. ಇದರಿಂದ ಆ ತಾಯಂದಿರಿಗೂ ಸ್ವಲ್ಪ ಹಣಕಾಸಿನ ಸಹಾಯವಾಗುತ್ತದೆ. ಆದ್ದರಿಂದ, ತಾವು ನಮ್ಮ ಸಂಸ್ಥೆಯಿಂದ ಯಾವುದೇ ವಸ್ತು ಖರೀದಿಸಿದರೂ, ಅದು ನೇರವಾಗಿ ಈ ಮಕ್ಕಳ ಅಭಿವೃದ್ಧಿಗೆ ತಲುಪುತ್ತದೆ. ಈ ಮುದ್ದು ಮಕ್ಕಳು, ಅವರ ನ್ಯೂನ್ಯತೆ ಜೊತೆಗೆ, ಸಾಧ್ಯವಾದಷ್ಟು ಮಟ್ಟಿಗೆ, ಈ ಸುಂದರ ಸಮಾಜದಲ್ಲಿ ಗಟ್ಟಿಯಾಗಿ ನಿಲ್ಲಬೇಕು ಎಂಬುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಹೌದು, ಅವರು , ಈ ” ಆತ್ಮನಿರ್ಬರ ಭಾರತದ” ಒಂದು ಪುಟ್ಟ ಭಾಗವಲ್ಲವೇ?

ಬಟ್ಟೆ  ಕೈ ಚೀಲ ಬೆಲೆ ರೂಪಾಯಿ 80 ಮಾತ್ರ.

ಕೊರಿಯರ್ ಮೂಲಕವು ಕಳುಹಿಸಲಾಗುವುದು. Charges Extra.

Average rating 5 / 5. Vote count: 1

No votes so far! Be the first to rate this post.

ಕಲಾಕೃಷಿ ಕೆ. ಆರ್.ರಸ್ತೆ ಬೆಂಗಳೂರು ,Bengaluru

Leave a Reply

Your email address will not be published.

Open chat